(ಅ) ಚಿತ್ರ ನೋಡಿ ಉತ್ತರಿಸಿರಿ :
1. C) ಚಿತ್ರವನ್ನು ನೋಡಿ 10 ಪದಗಳನ್ನು ಬರೆಯಿರಿ:
ಅ) ಚಿತ್ರಕ್ಕೆ ಸಂಬಂಧಿಸಿದಂತೆ 5 ವಾಕ್ಯಗಳನ್ನು ಬರೆಯಿರಿ:
1. ಹಕ್ಕಿಗಳು ಆಕಾಶದಲ್ಲಿ ಹಾರುತ್ತಿವೆ.
2. ಹುಡುಗರು ಆಟವನ್ನು ಆಡುತ್ತಿದ್ದಾರೆ.
3. ಬಡಗಿ ಮರಗೆಲಸ ಮಾಡುತ್ತಿದ್ದಾನೆ.
4. ಅನೇಕ ಮರ-ಗಿಡಗಳಿವ.
5. ದೂರದಲ್ಲಿ ಬೆಟ್ಟ ಕಾಣಿಸುತ್ತಿದೆ
ಚಿತ್ರ ಸರಣಿ ನೋಡಿ ಕಥೆ ಹೇಳಲಿ.
ಒಮ್ಮೆ ಎರಡು ಬೆಕ್ಕುಗಳಿಗೆ ಬೆಣ್ಣೆ ತುಂಬಿದ ಒಂದು ಗಡಿಗೆ | ಸಿಕ್ಕಿತು. ಆ ಗಡಿಗೆಯಲ್ಲಿದ್ದ ಬೆಣ್ಣೆಯನ್ನು ಯಾರು ಮೊದಲು ಸೇವಿಸಬೇಕು ಎಂಬ ವಿಚಾರದಲ್ಲಿ ಅವೆರಡರ ನಡುವೆ ಘರ್ಷಣೆ ಉಂಟಾಯಿತು. ಇದೇ ಸಮಯದಲ್ಲಿ ಮರದ ಮೇಲಿದ್ದ ಮಂಗ ಒಂದು ಆ ಬೆಕ್ಕುಗಳ ನಡುವಿನ ಜಗಳ ಕಂಡು ಅವುಗಳ ಸಮಸ್ಯೆಗೆ ತಾನು ಪರಿಹಾರ ಕೂಡಿಸುವುದಾಗಿ ತಿಳಿಸಿತು. ಅದರಂತೆ ಮಂಗ ಒಂದು ತಕ್ಕಡಿ ತಂದು ಅದರ ಎರಡು ಕಡೆ ಬೆಣ್ಣೆ ತುಂಬಿ ತಕ್ಕಡಿಯಲ್ಲಿ
ಬೆಣ್ಣೆ ತುಂಬಿದಂತೆ, ಸ್ವಲ್ಪ ಸ್ವಲ್ಪ ಬೆಣ್ಣೆಯನ್ನು ಮಂಗ ತಿನ್ನುತ್ತಾ ಬಂದಿತು. ಹೀಗೆ ಹೆಚ್ಚಾದ ಬೆಣ್ಣೆಯನ್ನೆಲ್ಲ ಸ್ವಲ್ಪಸ್ವಲ್ಪ ತಿಂದು ಮಂಗ ಬೆಣ್ಣೆಯನ್ನು ಖಾಲಿ ಮಾಡಿ ಹೊರಟಿತು. ಇದರಿಂದ ತಿಳಿದು ಬರುವುದು ಏನೆಂದರೆ ‘ಇಬ್ಬರ ಜಗಳ ಮೂರನೆಯವನಿಗೆ ಲಾಭ.
2. ಕಥೆ ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ : ಇರುವೆ ಮತ್ತು ಮಿಡತೆ
ವಸಂತ ಋತು ಎಲ್ಲಡ, ಮರಗಿಡಗಳಲ್ಲಿ ಹೊಸ ಚಿಗುರು ಹೊಮ್ಮಿದೆ. ಬಣ್ಣ ಬಣ್ಣದ ಹೂಗಳು ಅರಳಿವೆ.
ವನಗಳಲ್ಲಿನ ಸೊಬಗು ಕಣ್ಮನಗಳನ್ನು ಸೆಳೆದಿದೆ. ಮಿಡತೆಯೊಂದು ಅತ್ತಿತ್ತ ಸುತ್ತಾಡುತ್ತ ಕಾಲಕಳೆಯುತ್ತಿದೆ.
ಒಂದು ದಿನ ಇರುವೆಯೊಂದು ಬಾಯಲ್ಲಿ ಕಾಳು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಂಡ ಮಿಡತೆ ವನವ ಸುತ್ತಿ ಬರಲು ಜೊತೆ ಕರೆಯಿತು. ನಾನು ಆಹಾರ ಸಂಗ್ರಹಿಸಬೇಕಿದೆ. ಈಗ ನಿನ್ನೊಂದಿಗೆ ಬರಲು ನನಗೆ ಸಮಯವಿಲ್ಲವೆಂದು ಇರುವ ಹೇಳಿತು. ಇರುವೆಯ ಮಾತಿಗೆ ನಕ್ಕು ಮಿಡತೆ ಹಾರಿಹೋಯಿತು.
ಮಳಗಾಲದ ಒಂದು ದಿನ ಮಿಡತೆಗೆ ಆಹಾರ ಸಿಗದೇ ಹೋಯಿತು. ಹಸಿವನ್ನು ತಾಳಲಾರದೆ ಇರುವೆಯ ಬಳಿ ಕೇಳಿತು. “ಗೆಳೆಯಾ ನನಗೂ ಸ್ವಲ್ಪ ಆಹಾರ ಕೊಡುವೆ” ಎಂದು. “ವಸಂತ ಋತುವಿನಲ್ಲಿ ನಾನು ಕಷ್ಟಪಟ್ಟು ಆಹಾರ ಸಂಗ್ರಹ ಮಾಡಿದೇನೆ. ನೀನು ಈಗ ಸುತ್ತಾಡುತ್ತಾ ಕಾಲಹರಣ ಮಾಡಿದ. ಏನು ಮಾಡಲಿ ನಿನಗೆ ಆಹಾರ
ಕೊಟ್ಟರೆ ನನ್ನ ಪರಿವಾರಕ್ಕೆ ಕೊರತೆಯಾಗುತ್ತದೆಯಲ್ಲಾ ಎಂದಿತು ಇರುವ ಇರುವೆಯ ಮಾತಿನಿಂದ ಮಿಡತೆಗೆ ತನ್ನ ತಪ್ಪಿನ ಅರಿವಾಯಿತು. “ಗೆಳೆಯಾ ನಿನ್ನಿಂದ ನಾನು ಪಾಠ ಕಲಿತಿರುವೆ” ಎಂದು ವಿನಯದಿಂದ ಹೇಳಿತು. ಮಿಡತೆಯಲ್ಲಾದ ಪರಿವರ್ತನೆಗೆ ಇರುವೆ ಮೆಚ್ಚುಗೆ ವ್ಯಕ್ತಪಡಿಸಿತು. ತನ್ನ ಆಹಾರವನ್ನು ಮಿಡತೆಯೊಂದಿಗೆ ಹಂಚಿ ತಿಂದಿತು.
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿ ಬರೆಯಿರಿ:
1. ವಸಂತ ಋತು ಕಣ್ಮನಗಳಿಗೆ ಸೊಬಗನ್ನು ತರುತ್ತಿತ್ತುಏಕೆ?
ವಸಂತ ಋತುಗಳಲ್ಲಿ ಮರಗಿಡಗಳು ಚಿಗುರೂಡದು ಬಣ್ಣ ಬಣ್ಣದ ಹೂಗಳು ಅರಳುವುದರಿಂದ ಕಣ್ಮನಗಳಿಗೆ ಸೊಬಗನ್ನು ತರುತ್ತದೆ.
2. ವಸಂತ ಕಾಲದಲ್ಲಿ ಮಿಡತೆ ಯಾವ ರೀತಿ ಕಾಲ ಕಳೆಯುತ
ವಸಂತ ಕಾಲದಲ್ಲಿ ಮಿಡತೆ ಅತ್ತಿತ್ತ ಸುತ್ತಾಡುತ್ತಾ ಕಾಲ ಕಳೆಯುತ್ತಿತ್ತು.
3. ವಸಂತ ಕಾಲದಲ್ಲಿ ಇರುವ ಯಾವ ಕೆಲಸದಲ್ಲಿ ನಿರತವಾಗಿತ್ತು?
ವಸಂತ ಕಾಲದಲ್ಲಿ ಇರುವ ಕಾಳು ಸಂಗ್ರಹಿಸುವ ಕೆಲಸದಲ್ಲಿ ನಿರತವಾಗಿತ್ತು.
4. ಮಳೆಗಾಲದಲ್ಲಿ ಮಿಡತೆಗೆ ಯಾವ ತೊಂದರೆ ಉಂಟಾಯಿತು?
ಮಳೆಗಾಲದಲ್ಲಿ ಮಿಡತೆಗೆ ಆಹಾರದ ತೊಂದರೆ ಉಂಟಾಯಿತು.
5. ಇರುವೆ ಮಿಡತೆಗೆ ಏನೆಂದು ಬುದ್ಧಿ ಹೇಳಿತು?
ಇರುವ ಮಿಡತೆಗೆ ನಾನು ವಸಂತ ಋತುವಿನಲ್ಲಿ ಕಷ್ಟಪಟ್ಟು ಆಹಾರ ಸಂಗ್ರಹ ಮಾಡಿದೇನೆ ನೀನು ಆಗ ಸುತ್ತಾಡುತ್ತಾ ಕಾಲಹರಣ ಮಾಡಿದೆ. ಏನು ಮಾಡಲಿ ನಿನಗೆ ಆಹಾರ ಕೊಟ್ಟರೆ ನನ್ನ ಪರಿವಾರಕ್ಕೆ ಕೊರತೆಯಾಗುತ್ತದೆ ಎಂದು ಬುದ್ದಿ ಹೇಳಿತು.
6. ಮಿಡತ ಮತ್ತು ಇರುವ ಇವುಗಳಲ್ಲಿ ನೀವು ಯಾವುದನ್ನು ಮೆಚ್ಚುಏರಿ? ಏಕೆ?
ಇರುವೆಯನ್ನು ನಾನು ಮೆಚ್ಚುತ್ತೇನ. ಕಾರಣ ಇರುವೆಯಲ್ಲಿ ವಿನಯವಂತಿಕೆಯ ಜೊತೆ ಕಷ್ಟವಟ್ಟು ದುಡಿಯುವ ಛಲವಿದೆ. ಈ ಗುಣವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.