ಅಭ್ಯಾಸ

I. ಪದಗಳ ಅರ್ಥ ತಿಳಿಯಿರಿ.

ಉಲಿ – ಧ್ವನಿ ಕೂಗು

ಕಾಡು – ಅರಣ್ಯ

ಕೊಳ – ಕಸ, ಗಲೀಜು, ಹೊಲಸು

ಚೆಲುವು – ಸೊಗಸು

ಪೀಳಿಗೆ – ವಂಶ

ಬದುಕು – ಜೀವನ

ರಕ್ಷಿಸು – ಕಾಪಾಡು

ಹಕ್ಕಿ – ಪಕ್ಷಿ

ಕಟ್ಟಿದ – ನಿರ್ಮಿಸಿದ ಕೊ

ಡುಗೆ – ಉಡುಗೊರ

ಖಳ – ದುಷ್ಮ

ತಿದ್ದು – ಸರಿಪಡಿಸು

ಪ್ರಕೃತಿ – ನಿಸರ್ಗ

ಬೆರಸು – ಸೇರಿಸು

ಸಿರಿ – ಸಂಪತ್ತು

ಗಮನಿಸಿ ತಿಳಿಯಿರಿ.

1. ಬದುಕು ಹಸುರಾಗಬೇಕು – ಜೀವನ ಸುಂದರವಾಗಿರಬೇಕು.

2. ನಾಳಿನ ಪೀಳಿಗೆ – ನಮ್ಮ ನಂತರದ ವಂಶಕ್ಕೆ ಸೇರಿದವರು.

II. ಪಶ್ನೆಗಳು

ಅ) ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:

1. ಪಕೃತಿ ಕೊಟ್ಟ ಕೊಡುಗೆಗಳು ಯಾವುವು?

ನೆಲ, ಜಲ, ಕಾಡು, ಗೀಜಗನ ಗೂಡು, ಇವೆಲ್ಲಾ ಪ್ರಕೃತಿ ಕೊಟ್ಟ ಕೊಡುಗೆಗಳು.

2. ಹೊಳೆಗೆ ಕೊಳೆ ಬೆರೆಸುತ್ತಿರುವವರು ಯಾರು?

ದುಷ್ಕೃರು ಹೂಳಗೆ ಕೊಳೆ ಬರಸುತ್ತಿದ್ದಾರ.

3. ಗಾಳಿಯನ್ನು ಹೇಗೆ ಮಲಿನಗೊಳಿಸುತ್ತಿದ್ದಾರೆ?

ಈ ಬಗೆ ಬಗೆಯ ಹೊಗೆಯನ್ನು ಉಗುಳಿ, ಗಾಳಿಯನ್ನು – ಮಲಿನಗೊಳಿಸುತ್ತಿದ್ದಾರೆ.

4. ಮರ ಕಡಿಯುವುದರಿಂದ ಆಗುವ ಹಾನಿ ಏನು?

ಮರ ಕಡಿಯುವುದರಿಂದ ಎಲ್ಲಾ ಕಡೆ ನರಳಿಲ್ಲದೇ ಭಣ ಭಣ ಬಿಸಿಲೇ ಇರುವುದು.

5. ನಾವು ಯಾರಿಗಾಗಿ ನೆಲ, ಜಲಗಳನ್ನು ರಕ್ಷಿಸಬೇಕು?

ನಾವು ನಮ್ಮ ನಾಳಿನ ಪೀಳಿಗೆಯ ಜನರಿಗಾಗಿ ನಲ, ಜಲಗಳನ್ನು ರಕ್ಷಿಸಬೇಕು.

ಆ) ಎರಡು ಮೂರು ವಾಕ್ಯಗಳ ಉತ್ತರ ಬರಿಯಿರಿ:

1. ಪ್ರಕೃತಿಗೆ ಸಂಬಂಧಿಸಿದ ಯಾವ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ಕವಿ ಹೇಳುತ್ತಿದ್ದಾರೆ?

ಉತ್ತರ :

ಪುಕೃತಿಗೆ ಸಂಬಂಧಿಸಿದ ನೀರನ್ನು ಮಲಿನಗೊಳಿಸುವ, ಉಗುಳಿ ಗಾಳಿ ಮರವ ಕಡಿದು ಬಿಸಿಲಿಗೆ ಕಾರಣವಾಗುವ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ಕವಿ ಹೇಳುತ್ತಿದ್ದಾರೆ.

2. ಗಾಳಿ, ನೀರು ಮಲಿನವಾಗದಿರಲು ಏನು ಮಾಡಬೇಕು?

ಕಾರ್ಖಾನೆಗಳ ಕೊಳಕನ್ನು ರಾಸಾಯನಿಕಗಳನ್ನು ಎಲ್ಲೆಡೆಯ ಕಸ ಕೊಳಕನ್ನು ಹರಿವ ಹೊಳೆಗೆ ಬಿಡಬಾರದು. ಹಾಗೆಯೇ ವಾಹನಗಳ ಹಾಗೂ ಕಾರ್ಖಾನೆಗಳ ಹೊಗೆಯನ್ನು ಗಾಳಿಗೆ ಬಿಡದಂತೆ ತಡೆಯುವುದರಿಂದ ಮಲಿನತೆಯನ್ನು ತಡೆಗಟ್ಟಬಹುದು.

3. ಚಿಲಿಪಿಲಿ ಉಲಿವ ಹಕ್ಕಿಗಳು ಏಕ ಬಿಕಿ ಬಿಕಿ, ಅಳುತ್ತಿವೆ?

ಚಿಲಿ ಪಿಲಿ ಉಲಿವ ಹಕ್ಕಿಗಳು ತಮಗೆ ಆಶ್ರಯದಾತವಾದ ಮರಗಳ ಇಲ್ಲದಿರುವುದರಿಂದ ಬಿಕ್ಕಿ ಬಿಕ್ಕಿ ಅಳುತ್ತಿವೆ.

4. ಕರುನಾಡ ಚೆಲುವನ್ನು ಹೇಗೆ ರಕ್ಷಿಸಬೇಕಾಗಿದೆ?

ನಮ್ಮ ನೆಲ-ಜಲಗಳನ್ನು ರಕ್ಷಿಸಬೇಕು. ಮಲಿನತೆಯನ್ನು ತಡಗಟ್ಟಬೇಕು. ವುಕೃತಿಯನ್ನು ಉಳಿಸಬೇಕು. ಮರಗಳನ್ನು ಕಡಿಯಬಾರದು. ಹೀಗೆ ಕರುನಾಡ ಚೆಲುವನ್ನು ರಕ್ಷಿಸಬೇಕು.

ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಯಿರಿ :

1. ಈ ನಲ ಈ ಜಲ ಹೀಗೇ ಇರಬೇಕಾದರೆ ಏನು ಮಾಡಬೇಕು ?

ಉತ್ತರ :

ಈ ನಲ ಈ ಜಲ ಹೀಗೇ ಇರಬೇಕಾದರೆ ನಾವು ಪರಿಸರ ಸಂರಕ್ಷಣೆ ಮಾಡಬೇಕು, ಮಾಲಿನ್ಯ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು, ಅಗತ್ಯಕ್ಕೆ ತಕ್ಕಂತೆ ಈ ನೆಲ, ಜಲಗಳ ಬಳಕೆ ಆಗಬೇಕು.

ನಮ್ಮ ದುರಾಸೆಗೆ ಪುಕೃತಿಯನ್ನು ಹಾಳು ಮಾಡುವುದನ್ನು ತೊರೆಯಬೇಕು, ಮರಗಳನ್ನು ಹೆಚ್ಚು ಬೆಳಸಿ, ವಾಹನ, ಕೈಗಾರಿಕೆ ಸಂಖ್ಯೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ಈ ನೆಲ ಈ ಜಲ ರಕ್ಷಿಸಬಹುದಾಗಿದೆ.

2. ನೆಲ ಜಲ ರಕ್ಷಿಸುವುದರಿಂದ ಆಗುವ ಪ್ರಯೋಜನಗಳೇನು?

ಉತ್ತರ :

ಪ್ರಕೃತಿಯ ಸಂಪತ್ತನ್ನು ಉಳಿಸಬಹುದು

* ಪ್ರಕೃತಿಯ ಗಾಳಿ ಸೇವಿಸಬಹುದು

* ಸ್ವಚ್ಛ ಗಾಳಿ ಸೇವಿಸಬಹುದು

* ಮಲಿನತೆ ದೂರ ಮಾಡುವುದರಿಂದ ಸ್ವಚ್ಛ ಗಾಳಿ ನೀರು

ಸೇವಿಸಬಹುದು

* ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು

* ಪ್ರಾಣಿ ಪಶು ಪಕ್ಷಿಗಳ ಸಂರಕ್ಷಣೆ ಮಾಡಬಹುದು * ಎಲ್ಲ ಜೀವಿಗಳು ಬದುಕಬಹುದಾದ ಯೋಗ್ಯ ವಾತಾವರಣ, ನಿರ್ಮಿಸಬಹುದಾಗಿದೆ.

II. ಭಾಷಾಭ್ಯಾಸ

ಅ) ಪದ್ಯದಲ್ಲಿ ಬಳಕೆಯಾಗಿರುವ ಈ ಪದಗಳ ವಿಶೇಷತೆಯನ್ನು ಗಮನಿಲ.

1. ಜುಳುಜುಳು

2. ಚಿಲಿಪಿಲಿ

3.298 299

4. ಭಣ ಭಣ

ಈ ಮೇಲಿನ ಪದಗಳಲ್ಲಿ ನದಿ ಹರಿಯುವ ಶಬ್ದವನ್ನು ಹಕ್ಕಿಗಳು ಕೂಗುವ ಧ್ವನಿಯನ್ನು ಹಕ್ಕುಗಳು ಅಳುವ ರೀತಿಯನ್ನು ಯಥಾವತ್ತಾಗಿ ಅನುಕರಿಸಿ ಹೇಳಲಾಗಿದೆ. ಈ ರೀತಿ ಅನುಕರಿಸಿ ಹೇಳುವ ಪದಗಳನ್ನು ಅನುಕರಣಾ ಅವ್ಯಯಗಳು’ ಎಂದು ಕರೆಯಲಾಗುತ್ತದೆ. ಇಂತಹ ಅನುಕರಣಾ ಶಬ್ದಗಳಿಗೆ ಉದಾಹರಣೆ ನೀಡಿರಿ.

ಅನುಕರಣಾ ಅವ್ಯಯ

ಪಟವಟ ಝಳು

ಸರ ಸರ ಚಟಪಟ

ದಡದಡ

ದ್ವಿರುಕ್ತಿ

ತಮ್ಮ ಮನದ ಇಂಗಿತ ಒತ್ತಿಹೇಳಲು ಒಂದೇ ಪದವನ್ನು ಎರಡೆರಡು ಬಳಸುತ್ತೇವೆ. ಈ ಪದಗಳೇ ದ್ವಿರುಕ್ತಿ ಎನಿಸುತ್ತದೆ.

ಹೌದು ಹೌದು

ಒಳ್ಳೆಯ ಒಳ್ಳೆಯ

ರಾಶಿ ರಾಶಿ

ಮೊದಲು ಮೊದಲು

ಬಗೆ ಬಗೆ

ಆ) ಈ ಕೆಳಗಿನ ಸಂದರ್ಭಗಳಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನಗಳನ್ನು ಒಂದೆರಡು ವಾಕ್ಯಗಳಲ್ಲಿ ಬರೆಯಿರಿ.

1. ಅನಧಿಕೃತವಾಗಿ ರಸ್ತೆಯ ಅಂಚಿನ ಸಾಲುಮರಗಳನ್ನು ಕರಿಯುತ್ತಿದ್ದಾರೆ.

ಮರ ಕಡಿಯುವವರ ವಿರುದ್ಧ ಹೋರಾಡುತ್ತೇನೆ. ಮರ ಕಡಿಯದಂತೆ ವಿನಂತಿಸಿಕೊಳ್ಳುತ್ತೇನೆ. ಮರದಿಂದ ಆಗುವ ಪ್ರಯೋಜನಗಳ ಬಗೆಗೆ ವಿವರಿಸುತ್ತೇನೆ. ಇಲ್ಲವಾದರೆ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುತ್ತೇನೆ.

2. ಗೆಳೆಯನೊಬ್ಬನು ಅಲಂಕಾರಕ್ಕಾಗಿ ಹಕ್ಕುಗೂಡುಗಳನ್ನು ಸಂಗ್ರಹಿಸುತ್ತಿದ್ದಾನೆ.

ಹಕ್ಕುಗೂಡನು ಕೆಲವರು ಅಲಂಕಾರಕ್ಕಾಗಿ ಸಂಗ್ರಹಿಸಿದರೆ ಅವರ ಮನಸ್ಸು ಪರಿವರ್ತಿಸಲು ಪ್ರಯತ್ನಿಸುತ್ತೇವೆ. ಹಕ್ಕಿಗೂಡು ಕಟ್ಟಲು ಪಡುವ ಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅಲಂಕಾರಿಕ ಗೂಡುನ್ನು ಎಲ್ಲಿಂದ ತಂದರೂ ಅಲ್ಲಿಯೇ ಇಟ್ಟು ಬರಲು ಮನಃ ಪರಿವರ್ತನ ಮಾಡುತ್ತೇನೆ.

3. ನಿಮ್ಮ ಊರಿನ ಕುಡಿಯುವ ನೀರಿನ ಕೆರೆಯಲ್ಲಿ ದನಕರುಗಳನ್ನು ತೊಳೆಯುತ್ತಿದ್ದಾರೆ.

ಮಳೆಯು ಕುಡಿಯುವ ನೀರಿನ ಜೀವಜಲ ಇಂತಹ

ಸಿಹಿಯಾದ ನೀರನು ಹಾಳು ಮಾಡುವುದು ಕಂಡರೆ ಅವರಿಗೆ ಬುದ್ಧಿ ಮಾತು ಹೇಳುತ್ತೇನೆ. ದನಕರುಗಳಿಗೆ ಕುಡಿಯುವ ನೀರಿಗೆ ಮೈ ತೊಳೆಯಲು ಪ್ರತ್ಯೇಕ ನೀರಿನ ತೊಟ್ಟಿ ನಿರ್ಮಿಸಲು ಸೂಚಿಸುತ್ತೇನೆ.

ಪೂರಕ ಓದು

ಆಕೆಯ ಹೆರು ಜೀವಿತ. ಅವಳಿಗೆ ಪಕ್ಷಿಗಳೆಂದರೆ ಬಲು ಪ್ರೀತಿ, ಅವರ ಮನೆಯ ಸುತ್ತಹತ್ತಾರು ಜಾತಿಯ ಪಕ್ಷಗಳು ನಲಿದಾಡುತ್ತಿದ್ದವು, ಪಕ್ಷಿಗಳಿಗೆ ಅನುಕೂಲವಾಗುವಂಥ ರಟ್ಟಿನ ಪೆಟ್ಟಿಗೆಗಳನ್ನು ಮನೆಯ ಸೂರಿನ ಸುತ್ತ ಮುತ್ತ ಕಟ್ಟಿದಳು. ಇವಳ ಈ ಕೆಲಸಕ್ಕೆ ಅವಳ ಅಣ್ಣನೂ ಸಹಾಯ ಮಾಡಿದನು. ಅಮ್ಮನಿಂದ ಅಕ್ಕಿ, ರಾಗಿ, ಜೋಳ, ಗೋಧಿ ಕಾಳುಗಳನ್ನು ಪಡೆದು ಹಕ್ಕಿಗಳಿಗೆ ಕಾಣುವಂತೆ ತಟ್ಟೆಯೊಂದರಲ್ಲಿ ಇಟ್ಟಳು. ಕುಡಿಯುವುದಕ್ಕಾಗಿ ಬಟ್ಟಲಲ್ಲಿ ನೀರನ್ನೂ ಇಟ್ಟಳು. ಪಕ್ಷಿಗಳು ಕಾಳು ತಿಂದು ನೀರು ಕುಡಿಯುವುದನ್ನು ನೋಡಿ ಸಂತಸಪಟ್ಟಳು. ರಟ್ಟಿನ ಪೆಟ್ಟಿಗೆಯಲ್ಲಿ ಗುಬ್ಬಿಗಳು ಹುಲ್ಲಿನ ಗರಿಗಳನ್ನು ತಂದು ಗೂಡನ್ನು ಕಟ್ಟಿದವು. ಕೆಲವೇ ದಿನಗಳಲ್ಲಿ ಗೂಡಿನಲ್ಲಿ ಮರಿಗಳ ಚಿಲಿಪಿಲಿ ದನಿ ಕೇಳಿಸಿತು. ಜೀವಿತ ತನ್ನ ಗೆಳೆಯ ಗೆಳತಿಯರನ್ನು ಕರೆದು ಪಕ್ಷಿಗಳನ್ನು ಎಲ್ಲರಿಗೂ ತೋರಿಸಿ ಸಂತಸದಿಂದ ವಿವರಣೆ ನೀಡುತ್ತಿದ್ದಳು. ಮನೆಯ ಸುತ್ತಮುತ್ತ ಹೂಗಿಡಗಳನ್ನು

ಬೆಳೆಸಿದಳು. ಮನೆಯ ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುವಂತೆ ಮಾಡಿದಳು ಜೀವಿತಾಳ ಪರಿಸರದ ಆಸಕ್ತಿಯನ್ನು ನೋಡಿ ಅವರ ತಂದೆ ಪ್ರೋತ್ಸಾಹಿಸಿದರು. ಮಗಳ ನಿಜವಾದ ಪರಿಸರ ರಕ್ಷಣೆ ಎಂದರೆ ಇದು. ಪರೀಕ್ಷೆಯಲ್ಲಿ ಪರಿಸರ ರಕ್ಷಣೆ ಕುರಿತು ವುಬಂಧ ಬರೆಯುವುದರಿಂದ ಪರಿಸರವನ್ನು ಕಾಪಾಡಿದಂತೆ ಆಗುವುದಿಲ್ಲ. ಬದಲಿಗೆ ನಿನಂತೆ ಕ್ರಿಯಾಶೀಲವಾಗಿ ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಬೇಕು ಎಂದರು. ಅದಕ್ಕೆ ಜೀವಿತ ಅಪ್ಪಾಜಿ ನನಗೆ ‘ಸಾಲುಮರದ ತಿಮ್ಮಜಕ್ಕ’ ಪೇರಣೆ ಎಂದಳು.

ಪ್ರಶ್ನೆಗಳು :

1. ಜೀವಿತ ಪಕ್ಷಿಗಳಿಗೆ ತನ್ನ ಮನೆಯ ಸುತ್ತಮುತ್ತ ಏನನ್ನು ಕಟ್ಟಿದ್ದಳು?

ಉತ್ತರ :

ಜೀವಿತ ಪಕ್ಷಿಗಳಿಗೆ ತನ್ನ ಮನೆಯ ಸುತ್ತಮುತ್ತ ರಟ್ಟಿನ ಪಟ್ಟಿಗೆಗಳನ್ನು ಕಟ್ಟಿದ್ದಳು.

2. ಜೀವಿತ ಪಕ್ಷಿಗಳಿಗಾಗಿ ಯಾವ ಆಹಾರ – ಸಂಗ್ರಹಿಸಿಡುತ್ತಿದ್ದಳು?

ಉತ್ತರ :

ಜೀವಿತ ಪಕ್ಷಿಗಳಾಗಿ ಅಕ್ಕಿ, ರಾಗಿ, ಜೋಳ, ಗೋಧಿ, ಕಾಳುಗಳನ್ನು ಸಂಗ್ರಹಿಸಿ ಇಡುತ್ತಿದ್ದಳು.

3. ಜೀವಿತಳಿಗೆ ಪರಿಸರ ಕಾಳಜಿ ಮಾಡಲು ಪೇರಣಾಶಕ್ತಿ ಯಾವುದು?

ಉತ್ತರ :

ಜೀವಿತಳಿಗೆ ಪರಿಸರ ಕಾಳಜಿ ಮಾಡಲು ಪೇ ರಣಾಶಕ್ತಿ ಸಾಲುಮರದ ತಿಮ್ಮಕ್ಕ.

4. ಜೀವಿತಳ ತಂದೆಯ ಪ್ರಕಾರ ಪರಿಸರ ಸಂರಕ್ಷಣೆ ಎಂದರೇನು?

ಉತ್ತರ :

ಜೀವಿತಳ ತಂದೆಯ ಪ್ರಕಾರ ಪರಿಸರ ಸಂರಕ್ಷಣೆ ಎಂದರೇ ಮನೆಯ ಸುತ್ತಮುತ್ತ ಹೂಗಿಡಗಳನ್ನು ಬೆಳಸು ವುದು. ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು, ಕ್ರಿಯಾಶೀಲರಾಗಿ ಪರಿಸರ ಸಂರಕ್ಷಣೆಯನ್ನು ಎಲ್ಲರೂ ತೊಡಗುವುದು.

ಪ್ರಬಂಧ

ಸ್ತ್ರೀ ಶಿಕ್ಷಣ :

ಹಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ‘ಮನೆಯ ಮೊದಲ ಪಾಠಶಾಲೆ’, ‘ತಾಯಿಯ ಮೊದಲ ಗುರು’ ಎಂಬ ಮಾತಿನಂತೆ ಸ್ತ್ರೀ ಶಿಕ್ಷಣದ ಮಹತ್ವವನ್ನು ಸಾರುತ್ತವೆ. ಸ್ತ್ರೀಯು ಕೇವಲ ತಾನು ಅಕ್ಷರಸ್ಕಳಾಗುವುದ ಅಲ್ಲದೆ ತನ್ನ ಕುಟುಂಬ ಮತ್ತು ಸುತ್ತಲ ಪರಿಸರವನ್ನು ಸುಶಿಕ್ಷಿತರಾಗಿ ಮಾಡುತ್ತಾಳೆ. ದೇಶವನ್ನು ಆಳಿದ ಇಂದಿರಾಗಾಂಧಿ ಕರ್ನಾಟಕದ ರಾಜ್ಯಪಾಲರಾದ ರಮಾದೇವಿ, ಕೋಟೆಯನ್ನು ಕಾಯ್ದೆ ಓಬವ್ವ, ಬ್ರಿಟೀಷರಿಗೆ ಸಡ್ಡು ಹೊಡೆದ ಚೆನ್ನಮ್ಮ ಇವರೆಲ್ಲರೂ ಸ್ತ್ರೀ ಶಿಕ್ಷಣದ ಮಹತ್ವವನ್ನು ಸಾರುತ್ತಾರೆ. ವೇದಗಳ ಕಾಲದ ಮೈತ್ರಿ, ಗಾರ್ಗಿ, ಮುದ ಮುಂತಾದವರು ವಚನಕಾರರಾದ

ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಇವರೆಲ್ಲರೂ ಸ್ತ್ರೀ ಶಿಕ್ಷಣದ ಮಹತ್ವವನ್ನು ಸಾರಿದರು. ಪುರುಷ, ಪ್ರಧಾನ ಸಮಾಜದಲ್ಲಿದ್ದ ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ ಮುಂತಾದ ಅನಿಮ್ಮ ಪದ್ಧತಿಗಳು ಸ್ತ್ರೀ ಶಿಕ್ಷಣದ ಮುಖೇನ ದೂರವಾಗಿವೆ. ಇಂದು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ಶೈಕ್ಷಣಿಕ ಎಲ್ಲಾ ಕೇತ್ರಗಳಲ್ಲಿಯೂ ಸ್ತ್ರೀಯರು ದಾವುಗಾಲು ಹಾಕುತ್ತಿದ್ದಾರೆ. ಕಾರಣ ಸ್ತ್ರೀ ಶಿಕ್ಷಣಕ್ಕೆ ದೊರೆತಿರುವ ಅಭೂತಪೂರ್ವವಾದ ಸಹಕಾರವಾಗಿದೆ. ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಬೃಹತ್ ಯಂತ್ರೋಪಕರಣಗಳನ್ನ ನಡೆಸುವ, ರೈಲು, ವಿಮಾನ, ಚಲಾಯಿಸುವ ರಾಕೆಟ್‌ಗಳನ್ನು ನಿಯಂತ್ರಿಸುವ ಬೃಹತ್ ಹೆಜ್ಜೆಗಳನ್ನು ಸ್ತ್ರೀ ಶಿಕ್ಷಣದ ಮೂಲಕ

ಮುಂದುವರೆಸಿದ್ದಾರ. ಸ್ತ್ರೀ ಶಿಕ್ಷಣ ದೊರತ ಮೇಲೆ ತನ್ನ ಹಕ್ಕುಗಳನ್ನು ಕೇಳಿ ಪಡೆಯುವ ಹೋರಾಟ ಮಾಡುವ ಛಲ, ಬಲ, ಸ್ವಾಭಿಮಾನ ಇಂದು ಅವಳಿಗೂ ದೊರೆತಿದೆ. ನಾಲ್ಕು ಗೋಡೆಯ ಕತ್ತಲಿನಲ್ಲಿ ಕೊಳಯುತ್ತಿದ್ದ ಸ್ತ್ರೀಯರು ಇಂದು ಸ್ತ್ರೀ ಶಿಕ್ಷಣ ಪಡೆದು ಪ್ರಪಂಚಕ್ಕೆ ಬೆಳಕಾಗಿದ್ದಾರೆ. ಪಾಠ ಪ್ರವೇಶ :

ಪರಿಸರದ ಉಳಿವೇ ನಮ್ಮ ಉಳಿವು, ಪರಸರದ ಹಾನಿಯಿಂದ ನಮ್ಮ ಬದುಕು ದುಸ್ತರವಾಗುತ್ತಿದೆ. ಹೀಗಾಗಿ ಪರಿಸರ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ. ಜನರಲ್ಲಿ ಮಕ್ಕಳಲ್ಲಿ ಪರಸರದ ಜಾಗೃತಿಯನ್ನುಂಟುಮಾಡುವ ಕೆಲಸವನ್ನು ಅನೇಕ ಸಂಘಸಂಸ್ಥೆಗಳು ನಿರಂತರವಾಗಿ ಮಾಡುತ್ತಲೇ ಬಂದಿದೆ. ಈ ದಿಸೆಯಲ್ಲಿ ಕವಿತೆಗಳು ಮಹತ್ವದ ಪಾತ್ರವಹಿಸಿದೆ.

ಸಾರಾಂಶ :

ಕವಿಗಳು ಇಂದಿನ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಯಲಿ ಎಂಬ ಸದುದೇಶ ಈ ಪದ್ಯದಲ್ಲಿದೆಸರಳವಾದ ಪದಗಳ ಮೂಲಕ ಪರಿಸರದ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. “ಮಾನವ ಪರಿಸರದ ಕೈಗೊಂಬೆ” ಎಂಬುದನ್ನು ಮರೆಯಬಾರದು. ಪ್ರಕೃತಿ ದೇವಿಯು ನಮಗಾಗಿ ನೆಲ, ಜಲ, ಕಾಡು, ಗಾಳಿ : ಎಲ್ಲವನ್ನೂ ಧಾರಾಳವಾಗಿ ನೀಡಿದ್ದಾಳೆ. ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಬೇಕು. ಪರಿಶುದ್ಧವಾದ ನೀರಿಗೆ ಕಸ, ಹೊಲಸನ್ನು ಬಿಟ್ಟು, ಮಲಿನ ಮಾಡುವುದು, ಶುದ್ಧವಾದ ಗಾಳಿಗೆ ಹೊಗೆಯನ್ನು ರಾಸಾಯನಿಕ ಧೂಮವನ್ನು ಸೇರಿಸಿ ಕಲುಷಿತಗೊಳಿಸುವುದು ಹೀಗೆ, ಮಾಡಿದರೆ ಯಾರಿಗೆ ನಮ್ಮ? ಪರೋಪಕಾರಿಯಾದ ಮರವನ್ನು ಕಡಿದು ಪ್ರಕೃತಿಯನ್ನಲಿ ಅಸಮತೋಲನವನ್ನುಂಟು ಮಾಡಿದರೆ ಯಾರ ವಿನಾಶವಾಗುತ್ತದೆ. ಇಂದು ನಾವೆಲ್ಲಾ ಪುಕೃತಿಯ ಕೊಡುಗೆಯನ್ನು ಸ್ವೀಕರಿಸಿ, ತಿಂದುಡು ಹಾಯಾಗಿದ್ದು, ಪ್ರಕೃತಿಯನ್ನು ಹಾಳು ಮಾಡಿದರೆ, ನಮ್ಮ ಮುಂದಿನ ಜನಾಂಗ ಬದುಕುವುದಾದರೂ ಹೇಗೆ? ಇದು ಸರಿಯೇ? ಎಲ್ಲರೂ ಯೋಚಿಸಬೇಕಾದ ವಿಷಯ. ಕವಿಯ ಕಳಕಳಿ ಪುಕೃತಿಯನ್ನು ರಕ್ಷಿಸಿ, ಸುರಕ್ಷಿತವಾಗಿ ನಮ್ಮ ಮುಂದಿನ ಜನಾಂಗಕ್ಕೆ ಕೊಡೋಣ ಹಾಗೆಯೇ ನಮ್ಮ ಸಿರಿನಾಡು, ಕರುನಾಡಿನ ಚೆಲುವನ್ನು ಹೆಚ್ಚಿಸೋಣ.

ಕೃತಿಕಾರರ ಪರಿಚಯ:

ಎಚ್.ಡುಂಡಿರಾಜ್ ಅವರು 1956ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದುರುನಲ್ಲಿ ಜನಿಸಿದರು. ಎಂ.ಎಸ್ಸಿ (ಕೃಷಿ) ಪದವೀಧರರಾದ ಇವರು ಕಾರ್ಪೊರೇಷನ್ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ನನ್ನ ಕವಿತೆ ನನ್ನ ಹಾಗೆ’, “ಏನಾಯಿತು’, ‘ಬನ್ನಿ ನಮ್ಮ ಹಾಡಿಗೆ’, ಮುಂತಾದವು ಅವರ ಕವನ ಸಂಕಲನಗಳು. ‘ನವನೀತ’, ಪಂಚ್-ಕ- ಜಾಯ್’, ‘ಹನಿಕೇತನ’ ಇತ್ಯಾದಿಗಳು ಹನಿಗವನ

ಸಂಕಲನಗಳು, ‘ಹುಡುಕಾಟ’ ಅಧ್ಯಾನಪುರ’, ‘ಪುಕ್ಕಟೆ ಸಲಹೆ’ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಅಲ್ಲದ ಲಲಿತ ಪಂಬಧಗಳನ್ನು ಬರೆದಿದ್ದಾರೆ. ಇವರಿಗೆ ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ಕಡಂಗೋಡ್ಲು ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಬಿಂದುಶ್ರೀ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ‘ಈ ನೆಲ ಈ ಜಲ’ ಕವನವನ್ನು ಅವರ ‘ಬನ್ನಿ ನಮ್ಮ ಹಾಡಿಗೆ’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.