ಅಭ್ಯಾಸ

I. ಪದಗಳ ಅರ್ಥ ತಿಳಿಯಿರಿ.

ಅಡರು – ಮೇಲಕ್ಕೆ ಹತ್ತು

ಕಡಲು – ಸಮುದ

ಕೇರಿ – ಓಣಿ

ಝರಿ – ಜೋಕಾಲಿಯ ಜೀಕಾಟ

ಪಟ್ಟ – ಪಟ್ಟಾಭಿಷೇಕ

ಬೀಡು – ತಂಗುದಾಣ; ಮನ

ಮಗ – ತನ್ಮಯ; ಏಕಾಗ್ರತೆಯಿಂದ ಕೂಡಿದ

ಲಗ್ನ – ಮದುವೆ, ವಿವಾಹ

ಒಡೆ – ಬಿರಿ, ಬಿಚ್ಚು

ಕಾಣೆ – ಕಾಣದಿರುವುದು, ಅದೃಶ್ಯ

ಘಟ್ಟ – ಬೆಟ್ಟಗಳ ಸಾಲು

ನನಿಕೊನಿ – ಮೊಗ್ಗಿನ ತುದಿ

ಬಾನ – ಆಕಾಶ

ಮಳಿ – ಮಳೆ

ಮುಗಿಲು – ಮೋಡ: ಮೇಘ

ಹೂಳಿ – ಹೂಳೆ, ನದಿ

ಟಿಪ್ಪಣಿಗಳು

ಶ್ರಾವಣ – ಚಾಂದ್ರಮಾನದ ಐದನೆಯ ತಿಂಗಳು

ರಾವಣ – ಲಂಕೆಯ ಒಬ್ಬ ದೂರ. ವಿಶ್ರವಸ ಎಂಬುವವನ ಮಗ

ಭೈರವ – ಭೀಕರವಾದ ಭಯಂಕರವಾದ ಶಿವ.

II. ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:

1. ದ.ರಾ.ಬೇಂದ್ರೆಯವರ ಅಂಕಿತನಾಮವೇನು?

ಉತ್ತರ :

ದ.ರಾಬೇಂದ್ರೆಯವರ ಅಂಕಿತನಾಮ ಅಂಬಿಕಾತನಯದತ್ತ.

2. ಶ್ರಾವಣದ ಮಳೆಯನ್ನು ದರಾಬೇಂದ್ರೆಯವರು ಯಾರ ಕುಣಿತಕ್ಕೆ, ಹೋಲಿಸಿದ್ದಾರೆ? “

ಉತ್ತರ :

ಶ್ರಾವಣದ ಮಳೆಯನ್ನು ದ.ರಾಬೇಂದ್ರೆಯವರು ರಾವಣನ ಕುಣಿತಕ್ಕೆ ಹೋಲಿಸಿದ್ದಾರೆ,

3, ಶ್ರಾವಣದ ಬಿರುಗಾಳಿಯು ಯಾವ ರೂಪತಾಳಿದೆ ಎಂದು – ಬೇಂದ್ರೆಯವರು ಹೇಳಿದ್ದಾರೆ?

ಉತ್ತರ :

ಶ್ರಾವಣದ ಬಿರುಗಾಳಿಯು ಭೈರವನ ರೂಪತಾಳಿದ ಎಂದು ಬೇಂದ್ರೆಯವರು ಹೇಳಿದ್ದಾರೆ.

4. ಶ್ರಾವಣದ ಸಂದರ್ಭದಲ್ಲಿ ರವಿ ಕಾಣದಿರಲು – ಕಾರಣವೇನು?

ಉತ್ತರ :

ಶ್ರಾವಣದ ಸಂದರ್ಭದಲ್ಲಿ ಮುಗಿಲು ಸೂರ್ಯನನ್ನು ಮರೆಮಾಚುವುದರಿಂದ ಸೂಯ್ಯ ಕಾಣುವುದಿಲ್ಲ.

5. ಶ್ರಾವಣನದ ಹೊಳೆ ಮತ್ತು ಮಳಗಳ ಸಂಭ್ರಮವನ್ನು ಕವಿ ಏನೆಂದು ಬಣ್ಣಿಸಿದ್ದಾರೆ?

ಉತ್ತರ :

ಶ್ರಾವಣದಲ್ಲಿನ ಮಳೆ ಹೊಳೆ ಮತ್ತು ಮಳೆಗೆ ಲಗ್ನವಾದಂತೆ ಇರುತ್ತದೆ ಎಂದು ಕವಿ ಬಣ್ಣಿಸಿದ್ದಾರೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ:

1. ಬೇಂದ್ರೆಯವರು ಶ್ರಾವಣ ಎಲ್ಲೆಲ್ಲಿಗೆ ಬಂತು ಎಂದು ಹೇಳಿದ್ದಾರೆ?

ಉತ್ತರ :

ಬೇಂದ್ರೆಯವರು ಶ್ರಾವಣ ಕಾಡಿಗೆ, ನಾಡಿಗೆ, ಬೀದಿಗೆ, ಕಡಲಿಗೆ, ಘಟ್ಟಗಳಿಗೆ, ಬಾನಿಗೆ, ಊರಿಗೆ, ಕೇರಿಗೆ, ಮನೆ ಮನೆಗೆ ಬಂದಿತು ಎಂದು ಹೇಳಿದ್ದಾರೆ.

2. ಶ್ರಾವಣನ ಕಡಲಿನ ರೌದ್ರತೆಯನ್ನು ಕವಿ ಬೇಂದ್ರೆಯವರು ಹೇಗೆ ವರ್ಣಿಸಿದ್ದಾರೆ?

ಉತ್ತರ :

ಶ್ರಾವಣದ ಕಡಲಿನ ರೌದ್ರತೆ ರಾವಣ ಕುಣಿದಂತೆ ಇರುತ್ತದೆ. ಮೋಡದಿಂದ ಸುರಿದ ಮಳೆಯ ಆರ್ಭಟ ರಾವಣನು ರೌದ್ರದಿಂದ ನರ್ತನ ಮಾಡಿದಂತೆ ಇರುತ್ತದೆ. ಎಂದು ವರ್ಣಿಸಿದ್ರಾಶರ,

3. ಘಟಕೆ ಬಂದ ಶ್ರಾವಣ ಉಂಟು ಮಾಡಿದ ಪರಿಣಾಮವೇನು?

ಉತ್ತರ :

ಶ್ರಾವಣ ಘಟ್ಟ (ಬೆಟ್ಟಗಳ ಸಾಲು)ಕ್ಕೆ ಬಂದಾಗ ಹಸಿರು ಹಾಸಿದಂತೆ ಕಾಣುತ್ತದೆ. ಆ ದೃಶ್ಯ ಘಟ್ಟಕ್ಕೆ ಪಟ್ಟಾಭಿಷೇಕ (ಕಿರೀಟ ಧಾರಣೆ) ಮಾಡಿದಂತೆ ಕಾಣುತ್ತದೆ ಎಂದಿದ್ದಾರ.

4, ಶ್ರಾವಣದಲ್ಲಿ ಕವಿಗೆ ಹೊಳೆ, ಮಳ ಹಾಗೂ ಭೂಮಿಗಳು – ಹೀಗೆ ಕಾಣಿಸಿದವು.

ಉತ್ತರ : ಶ್ರಾವಣದಲ್ಲಿ ಹೊಳೆಗೆ ಶುಭಗಳಿಗಿರುವ ರೀತಿ ಕಾಣಿಸುತ್ತದೆ. ಹೊಳ ಮತ್ತು ಮಳೆಯ ನಡುವೆ ಲಗ್ನವಾದಂತೆ ಅನ್ನಿಸುತ್ತದೆ. ಈ ದೃಶ್ಯವನ್ನು ಭೂಮಿ ತಾಯಿ ಮಗ್ನಳಾಗಿ ನೋಡುವಂತೆ ಕಾಣುತ್ತದೆ ಎಂದು ವರ್ಣಿಸಿದ್ದಾರೆ.

5. ಊರು-ಕೇರಿಗಳಲ್ಲಿ ಶ್ರಾವಣದ ಸಂಭ್ರಮ ಹೇಗೆ ಕಾಣುತ್ತದೆ?

ಉತ್ತರ :

ಊರು-ಕೇರಿಗಳಲ್ಲಿ ಶ್ರಾವಣದ ಸಂಭ್ರಮ ಮುಗಿಲು ಮುಟ್ಟುತ್ತದೆ. ಮಳೆ, ಗಾಳಿ, ಹರುಷ ತರುತ್ತದೆ. ಜೋಕಾಲಿ ಜೀಕಿದ ಆನಂದವನ್ನು ತರುತ್ತದೆ ಎಂದು ಕವಿ

ತಿಳಿಸಿದ್ದಾರೆ.

6. ಕವಿಗೆ ಶ್ರಾವಣದ ಹಾಡು ಉಕ್ಕಿದುದು ಹೇಗೆ? ”

ಉತ್ತರ :

ಮಳೆಗಾಲದೊಂದಿಗೆ ಆಗಮಿಸುವ ಶ್ರಾವಣ ಮಾಸವು ಪ್ರಕೃತಿಯ ಚೆಲುವನ್ನು ಹೆಚ್ಚಾಗುವಂತೆ ಮಾಡುತ್ತದೆ. ಆಕಾಶ, ಭೂಮಿ, ಕಡಲು, ಬೆಟ್ಟ, ಮನಸ್ಸುಗಳ ಮೇಲೆ ಮಾಂತ್ರಿಕ ಶಕ್ತಿ ಬೀರಿ ಉಲ್ಲಾಸ, ಹರ್ಷ ತುಂಬುವಂತ ಮಾಡುವುದರಿಂದ ಕಿವಿಗೆ ಶ್ರಾವಣದ ಹಾಡು ಉಕ್ಕಿ ಬಂದಿತು.

ಆ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ:

1. ಬೇಂದ್ರೆಯವರು ಶ್ರಾವಣದ ಪ್ರಾಕೃತಿಕ ಸೌಂದರ್ಯವನ್ನು ಯಾವ ರೀತಿ ವರ್ಣಿಸಿದ್ದಾರೆ.

ಶ್ರಾವಣ ಮಾಸ ಬಂತೆಂದರೆ ಮೈ ಮನಸ್ಸುಗಳು ಹಿಗ್ಗುತ್ತವೆ. ಪ್ರಕೃತಿಯಲ್ಲಾಗುವ ಬದಲಾವಣೆ ಮನುಷ್ಯನಿಗೆ ಮುದ ನೀಡುತ್ತದೆ. ಬೇಸಿಗೆಯ ಬಿಸಿಲ ಬೇಗೆಯಿಂದ ಬಂದ ಭೂಮಿ ವರ್ಷ ಋತುವಿನಿಂದ ತಂಪಾಗಿರುತ್ತದೆ. ಆಕಾಶ ವೆಲ್ಲಾ ಕಾರ್ಮುಗಿಲಿನಿಂದ ಕೂಡಿ ಸೂರ್ಯನೊಂದಿಗೆ ಸ್ಪರ್ಧೆ ನಡೆಸುತ್ತಿರುತ್ತದೆ. ಮಳೆಯ ಹನಿಗಳಿಂದ ಪ್ರಕೃತಿ ದೇವಿ ಮಿಂದು ನಳನಳಿಸುತ್ತಿರುತ್ತಾಳೆ ಎಲ್ಲೆಡೆ ಹಸಿರು, ಇಂತಹ ಶ್ರಾವಣ ಮಾಸದ ಮಳೆ ಕಾಡಿಗೆ, ನಾಡಿಗೆ, ಬೀಡಿಗೆ ಬರುತ್ತದೆ. ಬರುವಾಗಲೇ ಉತ್ಸಾಹ, ಸಂಭ್ರಮಗಳನ್ನು ಹೊತ್ತು ತರುತ್ತದೆ. ಇಂತಹ ಶ್ರಾವಣ ಮಾಸದ ಮಳೆ ಸಮುದ್ರಕ್ಕೆ ರಾವಣ ಕುಣಿದ ತರಹ ಮತ್ತು ಶ್ರಾವಣದ ಗಾಳಿ ಭೈರವನ ರೂಪತಾಳಿ ಬರುತ್ತದೆ. ಘಟ್ಟದಲ್ಲಿ, ಆಕಾಶದಲ್ಲಿ ಭೂಮಿಯ ಮೇಲೆ ಎಲ್ಲಾ ಕಡೆಯೂ ಮಳೆಯ ಆರ್ಭಟ. ಇಂತಹ ಶುಭಗಳಿಗೆಯಲ್ಲಿ ಹೊಳ ಮತ್ತು ಮಳೆಗೆ ಲಗ್ನವಾಗುತ್ತದೆ. ಅದನ್ನೇ ತನ್ಮಯಳಾಗಿ ಭೂಮಿ ತಾಯಿ ನೋಡುತ್ತಿರುತ್ತಾಳ. ಹೀಗೆ ಊರಿಗೆ, ಕೇರಿಗೆ, ಬರುವ ಶ್ರಾವಣದ ಮಳ ಜೋಕಾಲಿಯ

ಜೀಕಿನಂತಿರುತ್ತದೆ. ಎಲ್ಲರೂ ಈ ಮಳೆಯನ್ನು ಸಂತೋಷ ಸಂಭ್ರಮದಿಂದ ಆಹ್ವಾನಿಸಿ, ಅದರಲ್ಲಿ ತಾವೂ ಒಂದಾಗುತ್ತಾರೆ. ಅವರ ಆನಂದ ಎಲ್ಲೇ ಮೀರಿರುತ್ತದೆ.

ಇಂತಹ ಸವಿಯನ್ನು ಇಂದಿನ ಮುಂದಿನ ಜನರೂ ಅನುಭವಿಸಲಿ ಎಂಬುವುದೇ ಕವಿಯ ಹಾರೈಕೆ. III. ಭಾಷಾಭ್ಯಾಸ

ಅ) ಈ ಕೆಳಗಿನ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.

ಮಾದರಿ – ಕುಣಿಾಂಗ = ಕುಣಿದ ಹಾಗ

1. ಬಂತು – ಬಂದಿತು

2. ಏಶ್ಯಾವ – ಏರಿದ

3. ಅಡಯ್ಯಾವ – ಮೇಲಕ್ಕೆ ಹತ್ತು

4. ಒಡೆದಾಟ – ಒದೆಯುವುದು

5. ಉಕ್ಕತಾವ – ಉಕ್ಕುತ್ತದೆ

6. ಅದರಾಗ – ಅದರಲ್ಲಿ

7. ಮರಕ – ಮರಕ್ಕೆ

ಆ) ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು

ಬರೆಯಿರಿ.

1. ಕಾಡು – ಅರಣ್ಯ, ವನ, ಕಾನನ

2. ಕಡಲು – ಸಮುದ್ರ ಸಾಗರ

3. ಬಾನು – ಆಕಾಶ, ನಭ

4. ರವಿ – ಸೂಯ್ಯ, ರವಿ, ಭಾಸ್ಕರ

5. ಮಳೆ – ವರುಣ

ಇ) ಕೆಳಗಿನ ವಿಚಾರಗಳನ್ನು ಕೇಳಿ ತಿಳಿಯಿರಿ. ಚಾಂದ್ರಮಾನ ಮಾಸಗಳು ಮತ್ತು ಋತುಗಳು

ಚೈತ್ರ, ವೈಶಾಖ – ವಸಂತ ಋತು

ಜೇವ, ಆಪಾಢ – ಗ್ರೀಷ್ಮ

ಋತು ಶ್ರಾವಣ, ಭಾದ್ರಪದ – ವರ್ಷ ಋತು.

ಆಜ, ಕಾರ್ತಿಕ – ಶರತ್ ಋತು

ಮಾರ್ಗಶಿರ, ಪುಷ್ಯ ಹೇಮಂತ ಋತು

ಮಾಘ, ಫಾಲ್ಕುಣ – ಶಿಶಿರ ಋತು

V. ಚಟುವಟಿಕೆಗಳು

ಕೆಳಗಿನ ಚಿತ್ರ ಸರಣಿಯನ್ನು ಗಮನಿಸಿ ಸನ್ನಿವೇಶ ವಿವರಿಸಿ.

A collage of a child holding an umbrella

Description automatically generated

ಪ್ರಶ್ನೆಗಳಿಗೆ ಉತ್ತರಿಸಿ.

1. ಹಗಲಿನಲ್ಲಿ ಎಲ್ಲಿ ತೆರೆಯುತ್ತಿತ್ತು?

ಹಗಲಿನಕ್ಕೆ ದಿಗು ತಟದಲ್ಲಿ ತೆರೆಯುತ್ತಿತ್ತು.

2. ಸುಪ್ರಭಾತವು ಯಾರಿಗೆ ಯಾರನ್ನು ತೋರಿಸುತ್ತಿತ್ತು?

ಸುಪುಭಾತವು ಕವಿಗೆ ಕವಿಯನ್ನು ತೋರಿಸುತ್ತಿತ್ತು.

3. ಈ ಪದ್ಯದಲ್ಲಿ ಬರುವ ಪ್ರಾಸಪದಗಳನ್ನು ಗುರುತಿಸಿ.

ಹಗಲಿನಕ್ಷೆ – ಗಗನಪಕ್ಷಿ

ಮಣ್ಣು – ಕಣ್ಣು ಹಣ್ಣಿ

ನಂತೆ – ಹೆಣ್ಣಿನಂತೆ

ಭದ್ರಮಾಸಂ – ಸುಪ್ರಭಾತಂ

ಪಾಠ ಪ್ರವೇಶ:

ಮನುಷ್ಯ ಪಕೃತಿಯ ಕೂಸು. ಆದರೆ ಆಧುನಿಕ ಧಾವಂತದ ಬದುಕಿನ ಅವಸರದಲ್ಲಿ ವುಕೃತಿಯ ಸಹಜ ವಿದ್ಯಮಾನಗಳಿಂದ ದೂರ ಸರಿಯುತ್ತ ಯಾಂತ್ರಿಕ ಬದುಕಿನತ್ತ ವಾಲಿಕೊಂಡಿದ್ದಾನೆ. ವಿವಿಧ ಋತುಮಾನಗಳಲ್ಲಿ ಪ್ರಕೃತಿ ಪಡೆಯುವ ಸೌಂದರ್ಯ, ರೌದ್ರತೆ, ಅದು ನೀಡುವ ಆನಂದ ತರುವ ಸಂಭ್ರಮವನ್ನು ಅನೇಕ ಕವಿಗಳು ವರ್ಣಿಸಿದ್ದಾರೆ. ಮಳೆಗಾಲದೊಂದಿಗೆ ಆಗಮಿಸುವ ಶ್ರಾವಣ ಮಾಸದಲ್ಲಿ ಭೂಮಿ, ಆಕಾಶ, ಮನೆ, ಮನಸ್ಸುಗಳ ಮೇಲೆ ಪ್ರಕೃತಿ ಮಾಡುವ ಮಾಂತ್ರಿಕ ಪರಿಣಾಮವನ್ನು ಬೇಂದ್ರೆಯವರು ಈ ಪದ್ಯದಲ್ಲಿ ಸೊಗಸಾಗಿ ವರ್ಣಿಸಿದ್ದಾರ.

ಸಾರಾಂಶ :

ಪ್ರಕೃತಿಯ ವರ್ಣನೆಯನ್ನು ಹಲವು ಕವಿಗಳು ಹಲವು ವೈಶಿಷ್ಟ್ಯತೆ ಮತ್ತು ವೈಭವಯುತವಾಗಿಯೇ ವರ್ಣಿಸಿದ್ದಾರೆ. ಅಂತಹದರಲ್ಲಿ ಬೇಂದ್ರೆಯವರ ‘ಶ್ರಾವಣ ಬಂತು ಕಾಡಿಗೆ’ ಪದ್ಯವೂ ಸಹ ಒಂದಾಗಿದೆ. ಕವಿಯ ಕಲ್ಪನೆಯಲ್ಲಿ ಮತ್ತು ವುಕೃತಿಗೆ ಶ್ರಾವಣ ಮಾಸವು ಬಹು ಮುಖ್ಯವಾಗಿ ಕಂಡು ಬಂದಿದೆ. ಏಕೆಂದರೆ ಅದು ಹೊಸ ಸೃಷ್ಟಿಯ ಅಥವಾ ಚಿಗುರಿನ ಕಾಲ, ಆ ಸಂದರ್ಭದಲ್ಲಿ ಪ್ರಕೃತಿಯು ಬಿರುಬಿಸಿಲಿನ ತಾಪದಿಂದ ಹೊರಬಂದು ತನ್ನೆಲ್ಲ ಎಲೆಯ ಹೊಸ ಚಿಗುರನ್ನು ತಂದುಕೊಂಡು ಸಂಭ್ರಮಿಸುವ ಹಂತವಾಗಿದೆ. ಈ ಸಂತೋಷವೇ ಕವಿಯ ಕಲ್ಪನೆಯಲ್ಲಿ ವಿಶಿಷ್ಟವಾಗಿ ಬಳಕೆಯಾಗಿರುವುದು. ಶ್ರಾವಣ ಮಾಸವು ಕಾಡಿಗೆ ಮತ್ತು ನಾಡಿಗೆ ಬಂದಿದ

ಎಂದು ಹೇಳುತ್ತಾ, ಅದರ ಸಂತೋಷವನ್ನು ಅನುಭವಿಸಿದ ಮಾರ್ಮಿಕವಾಗಿ ರಾವಣನ ಕುಣತಕ್ಕೆ ಭೈರವ (ಶಿವನ ಉಗ್ರರೂಪ) ಕುಣಿತಕ್ಕೆ ಹೋಲಿಸಲಾಗಿದೆ. ಶ್ರಾವಣದ ಆಗಮವಾದರೆ ಅದು ಬೆಟ್ಟಗಳನ್ನು ಆವರಿಸುವುದು ಪಟ್ಟಾಭಿಷೇಕ ಕಾಣುತ್ತದೆ. ಆಕಾಶವನ್ನೆಲ್ಲ ಆವರಿಸುವ ಕಳೆ ತುಂಬುತ್ತದೆ. ನಾಡಿನಲ್ಲಡೆ ಹೊಳ ತೊರೆ, ಹಳ್ಳದಲ್ಲಿ ನೀರು ತುಂಬಿ ಹರಿಯುತ್ತದೆ. ಮಳೆರಾಯ ಮಳೆಯನು ಸುರಿಸಲು ಆರಂಭಿಸುತ್ತಾನೆ. ಇಡೀ ಪ್ರಕೃತಿಯಲ್ಲಿ ಮದುವೆ ತಯಾರಿಯ ಕಳೆ ತುಂಬಿ ತುಳುಕುತ್ತದೆ. ಈ ಸೌಂದಯದಲ್ಲಿ ಭೂಮಿ ಮಗ್ನವಾಗಿ ಕಾಣುತ್ತದೆ.

ಶ್ರಾವಣ ಊರನ್ನು ಕೇರಿಯನ್ನು ಪ್ರವೇಶಿಸುದ ಮೇಲೆ ಜೀವಕಳೆ ತುಂಬಿ ಬರುತ್ತದೆ. ನಾಡಿನಡ ಜೋಕಾಲಿ ಆಡಿದಂತ ಸಂಭ್ರಮ ಮನಮುಟ್ಟುತ್ತದೆ. ಮನಮನೆಯನು ಪ್ರವೇಶಿಸುವ ಶ್ರಾವಣದ ಸಂಭ್ರಮ ಜನರ ಧ್ವನಿಯಲಿ ಮನಸ್ಸಿನಲ್ಲಿ ತುಂಬಿ ತುಳುಕುತ್ತದೆ.

ಕೃತಿಕಾರರ ಪರಿಚಯ :

ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು 31-01- ಸಲ್ಲಿಸಿದ್ದಾರೆ.’ 1896ರಲ್ಲಿ ಧಾರವಾಡದಲ್ಲಿ ಜನಿಸಿದರು. ‘ಅಂಬಿಕಾತನಯದತ್ತ’ ಅವರ ಕಾವ್ಯನಾಮ ಬೇಂದ್ರ ಅವರು ಧಾರವಾಡ, ಗದಗ, ಹುಬ್ಬಳ್ಳಿಗಳಲ್ಲಿ ಶಿಕ್ಷಕರಾಗಿ, ಆಕಾಶವಾಣಿಯ ಸಾಹಿತ್ಯ ಸಲಹಗಾರರಾಗಿ ಸೇವೆ ‘ಗರಿ’, ‘ಗಂಗಾವತರಣ, ‘ನಾದಲೀಲೆ’, ‘ಸಖೀಗೀತ’, ‘ ಉಯ್ಯಾಲೆ’, ‘ಅರಳು ಮರಳು’ ಇತ್ಯಾದಿ ಕವನ ಸಂಕಲನಗಳನ್ನು ‘ದೆವ್ವದ ಮನೆ’, ‘ನಗೆಹೊಗೆ’ ಮೊದಲಾದ ನಾಟಕಗಳನ್ನು ‘ಸಾಹಿತ್ಯದ ವಿರಾಟ್

ಸ್ವರೂಪ’ ‘ಕಾಮೋದ್ಯೋಗ’ ಮೊದಲಾದ ವಿಮರ್ಶಾ ಕೃತಿಗಳನ್ನು ಬರೆದಿದ್ದಾರ. ‘ಜಯಕರ್ನಾಟಕ’ ಜೀವನ’ ಪತ್ರಿಕೆಗಳ ಸಂಪಾದಕರಾಗಿದ್ದು ಮರಾಠಿ ಭಾಷೆಯಲ್ಲೂ ಸಾಹಿತ್ಯವನ್ನು ರಚಿಸಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ, ವಾರಾಣಿಸಿ ಕಾಶಿ ವಿದ್ಯಾಪೀಠಗಳಿಂದ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ’ ಮತ್ತು ‘ಫೆಲೋಶಿಪ್’, ‘ಪದ್ಮಶ್ರೀ’ ಹಾಗೂ ನಾಕುತಂತಿ – ೩ ಕವನಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ’ ಪಡೆದಿದ್ದಾರೆ. ಇವರು 26-10-1981ರಲ್ಲಿ ನಿಧನರಾದರು. ಪ್ರಸ್ತುತ ‘ಶ್ರಾವಣಾ ಬಂತು ಕಾಡಿಗೆ’ ಕವನವನ್ನು ಅವರು ‘ಹಾಡುಪಾಡು’ ಕವನ ಸಂಗ್ರಹದಿಂದ ಆಯ್ದುಕೊಳ್ಳಾಗಿದೆ.