1. ಅನ್ನದಾತ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ :
ಅನ್ನದಾತ ಎಂದು ರೈತನನ್ನು ಕರೆಯಲಾಗುತ್ತದೆ.
2. ರೈತನನ್ನು ಅನ್ನದಾತ ಎಂದು ಏಕೆ ಕರೆಯಲಾಗುತ್ತದೆ?
ಉತ್ತರ :
ರೈತನು ಭೂಮಿಯನ್ನು ಹಸನು ಮಾಡಿ ಬೆಳೆಯನ್ನು ಬೆಳದು, ನೀರು ಉಣಿಸಿ ಹಾರೈಕೆ ಮಾಡಿ, ಆಹಾರವನ್ನು ನಾಡಿಗೆ ಹಂಚುತ್ತಾನ ಆದ ಕಾರಣ ರೈತನನ್ನು ಅನ್ನದಾತ ಎನ್ನಲಾಗುತ್ತದೆ.
3. ಅನ್ನದಾತ ಎಲ್ಲಿ ದುಡಿಯುವನು?
ಉತ್ತರ :
ಅನ್ನದಾತ ಹೊಲದಲ್ಲಿ ದುಡಿಯುವನು.
4. ಅನ್ನದಾತನು ದವಸಧಾನ್ಯಗಳನ್ನು ಯಾರಿಗಾಗಿ ಬೆಳೆಯುವನು?
ಉತ್ತರ :
ಅನ್ನದಾತನು ದವಸಧಾನ್ಯಗಳನ್ನು ನಾಡ ಜನರಿಗಾಗಿ ಬೆಳೆಯುವವನು.
5. ಅನ್ನದಾತನು ಯಾವ ಕಷ್ಟ್ಯಗಳನ್ನು ಸಹಿಸುತ್ತಾನೆ? |
ಉತ್ತರ :
ಅನ್ನದಾತನು ಮಳೆ, ಗುಡುಗು, ಚಳಿ, ನಡುಗು, ಬಿಸಿಲಿನ ಬೇಗೆಯನ್ನು ಬೆವರು ಸುರಿಸುತ ಕಷ್ಟಗಳನ್ನು ಸಹಿಸುತ್ತಾನೆ.
6. ರೈತರು ದೇವರಿಂದ ಪಡೆದ ವರ ಯಾವುದು?
ಉತ್ತರ :
ರೈತರು ದೇವರಿಂದ ಗಟ್ಟಿ, ದೇಹ ಮತ್ತು ದೊಡ್ಡ ಮನಸ್ಸನ್ನು ವರವಾಗಿ ಪಡೆದಿದ್ದಾನ.
7. ಅನ್ನದಾತನ ಗೆಳೆಯರು ಯಾರು?
ಉತ್ತರ :
ಎರಡು ಎತ್ತುಗಳು ಅನ್ನದಾತನ ಗೆಳೆಯರು.
8. ಚೆನ್ನಬಸಪ್ಪ ಹೊಸಮನಿಯವರ ಕಾವ್ಯನಾಮವೇನು?
ಉತ್ತರ :
ಚೆನ್ನಬಸಪ್ಪ ಹೊಸಮನಿಯವರ ಕಾವ್ಯನಾಮ ಸತ್ಯಾರ್ಥಿ
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಅನ್ಮದಾತನು ನಾಡಿಗೆ ಹೇಗೆ ಸಹಕಾರಿಯಾಗಿದ್ದಾನೆ?
ಉತ್ತರ :
ಅನ್ನದಾತನು ಭೂಮಿಯನ್ನು ಹಸನು ಮಾಡಿ ಬೀಜವನ್ನು ಬಿತ್ತಿ, ಗೊಬ್ಬರ ಹಾಕಿ, ನೀರು ಉಣಿಸಿ ಹಾರೈಕೆ
ಮಾಡಿ ಆಹಾರವನ್ನು ನಾಡಿಗೆ ಹಂಚುತ್ತಾನೆ. ರೈತ ಕಷ್ಟಪಟ್ಟು ದುಡಿದು ನಾಡಿನ ಜನರ ಹಸಿವನ್ನು
ನೀಗುತ್ತಾನೆ. ಈ ರೀತಿ ಅನ್ನದಾತನು ನಾಡಿಗೆ ಸಹಕಾರಿಯಾಗಿದ್ದಾನೆ.
2, ರೈತನು ಎಂತಹ ಕಷ್ಟ್ಯಗಳನ್ನು ಸಹಿಸಿಕೊಂಡು ದುಡಿಯುತ್ತಾನೆ?
ಉತ್ತರ :
ರೈತನು ಮಳೆಯೇ ಬರಲಿ, ಗುಡುಗೇ ಬರಲಿ, ಚಳಿಯಾಗಿರಲಿ, ಬಿಸಿಲೇ ಇರಲಿ, ಬೆವರನ್ನು ಸುರಿಸಿ
ಕವ್ಯಗಳನ್ನು ಸಹಿಸಿಕೊಂಡು ದುಡಿಯುತ್ತಾನೆ.
3. ರೈತನನ್ನು ಯೋಗಿ ತ್ಯಾಗಿ ಎಂದು ಏಕ ಕರೆಯಲಾಗುತ್ತದೆ?
ಉತ್ತರ :
ರೈತನು ದೇವರಿಂದ ಗಟ್ಟಿ, ದೇಹ, ದೊಡ್ಡ ಮನಸ್ಸು
ವರವನ್ನು ಪಡೆದಿರುವ ಕಾರಣ ರೈತನನ್ನು ಯೋಗಿ ತಾಗಿ ಎಂದು ಕರೆಯಲಾಗುತ್ತದೆ.
4, ಎತ್ತುಗಳ ಜೊತೆ ರೈತ ಯಾವ ರೀತಿಯ ಸಂಬಂಧ ಹೊಂದಿದ್ದಾರೆ?
ಉತ್ತರ :
ಎತ್ತುಗಳು ರೈತನ ಜೊತೆಗೂಡಿ ಹೊಲದಲ್ಲಿ ದುಡಿಯುತ್ತವೆ. ಕತ್ಮಕಾಲದಲ್ಲಿ ಒಬ್ಬರಿಗೊಬ್ಬರು ಬದುಕುತ್ತಾರೆ. ಈ ರೀತಿ ರೈತ ಎತ್ತುಗಳ ಜೊತೆ ಸಂಬಂಧ ಹೊಂದಿದ್ದಾನ.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಫಿಲಿ.
1. ಕವಿ ರೈತನ ದುಡಿಮೆಯನ್ನು ಯಾವ ರೀತಿ ವರ್ಣಿಸಿದ್ದಾರೆ?
ಉತ್ತರ :
ಕವಿ ರೈತನ ದುಡಿಮೆಯನ್ನು ಈ ರೀತಿ ವರ್ಣಿಸಿದ್ದಾರೆ. ನಾಡಿನ ಜನರು ಮಾಡುವ ಊಟ ರೈತನ ಬೆವರಿನ ಫಲ. ಭೂಮಿಯನ್ನು ಹಸನು ಮಾಡಿ, ಬೀಜವನ್ನು ಬಿತ್ತಿ, ಗೊಬ್ಬರ ಹಾಕಿ, ನೀರು ಉಣಿಸಿ ಹಾರೈಕೆ ಮಾಡಿ, ಆಹಾರವನ್ನು ನಾಡಿಗೆ ಹಂಚುತ್ತಾನೆ. ಹೀಗಾಗಿಯೇ ರೈತನನ್ನು ನಮ್ಮ ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ಹೊಲದಲ್ಲಿ ದುಡಿದು ದವಸ ಧಾನ್ಯವನ್ನು ಬೆಳೆದು ನಾಡಿನ ಜನರಿಗೆ ಎಂದು ಬೆವರು ಸುರಿಸಿ ಬೆಳೆಯುತ್ತಾನೆ ಎಂದು ಕವಿಯು ವರ್ಣಿಸಿದ್ದಾರ.
2. ರೈತನ ಜೀವನವನ್ನು ಕುರಿತು ನಿಮ್ಮ ಅಭಿಪ್ರಾಯವನ್ನು ಬರೆಯರಿ.
ಉತ್ತರ :
ರೈತನು ಹೊಲದಲ್ಲಿ ದುಡಿದು ನಾಡ ಜನರು ಬದುಕಲು ದವಸ-ಧಾನ್ಯ ಬೆಳೆಯುವನು, ಎಂತಹದೇ
ಸಂದರ್ಭದಲ್ಲಿ ಮಳೆ, ಗುಡುಗು, ಚಳಿ, ಬಿಸಿಲಿನ ಬೇಗೆಯಾಗಲಿ ಬೆವರು ಸುರಿಸಿ ಕಷ್ಟಗಳನ್ನು
ಸಹಿಸಿಕೊಂಡು ಒಂದೇ ಸಮನೆ ದುಡಿಯುತ್ತಾನೆ.
ದೇವರಿಂದ ಗಟ್ಟಿ, ದೇಹ, ದೊಡ್ಡ ಮನಸ್ಸು ಇಂತಹ ವರವನ್ನು ಪಡೆದು ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು. ಎರಡು ಎತ್ತುಗಳ ಜೊತೆಗೂಡಿ ಹೊಲದಲ್ಲಿ ದುಡಿಯುತ್ತಾನೆ. ಇನ್ನೊಬ್ಬರ ಸಂತೋಷದಲ್ಲಿ ತನ್ನ ಸಂತೋಷ ಕಾಣುತ್ತಾನೆ.
ಆದುದರಿಂದ ರೈತನ ಜೀವನ ಯೋಗ್ಯವಾದ ಜೀವನ ಎಂಬುದು ನನ್ನ ಅಭಿಪ್ರಾಯವಾಗಿದೆ.
I. ಭಾಷಾಭ್ಯಾಸ
ಅ) ಗುಂಪಿಗೆ ಸೇರಲಿರುವ ಪದವನ್ನು ಆಲಿಸಿ
ಬರೆಯಿರಿ.
1. ಚಳಿಗಾಲ, ಮಳೆಗಾಲ, ನಡುಗಾಲ, ಬೇಸಿಗೆಕಾಲ =
ನಡುಗಾಲ
2. ಎತ್ತು, ಎಮ್ಮೆ, ಹೋರಿ, ನಂದಿ = ಎಮ್ಮೆ
3. ಬೆಟ್ಟ, ಹೂಲ, ತೋಟ, ಗದ್ದೆ = ಬೆಟ್ಟ
4. ಗೆಳೆಯ ಸ್ನೇಹಿತ, ಮಿತ್ರ, ಶತ್ರು = ಶತ್ರು
5. ರೈತ, ಅನ್ನದಾತ, ಕೃಷಿಕ, ವ್ಯಾಪಾರಿ = ವ್ಯಾಪಾರಿ
ಆ) ‘ಅ’ ಪಟ್ಟಿಗೆ ಫಲ ಹೊಂದುವ ಪದವನ್ನು ‘ಬ’ ಆ ಪಟ್ಟಿಯಿಂದ ಆಲಸಿ ಬರೆಯಿರಿ.
ಇ) ಕೃಷಿ ಥಂಬಂಧಿತ ಆರು ಪದಗಳನ್ನು ಬರೆಯಿರಿ. ಮಾದರಿ : ಎತ್ತು
1. ನೇಗಿಲು
2. ಇಳುವರಿ
3. ಉಳುಮ
4. ಬೆಳ
6. ಕಟಾವು
ಈ ‘ಅನ್ನದಾತ’ ಪದ್ಯದಲ್ಲಿ ಬಳಕೆಯಾಗಿರುವ ಪ್ರಾಥ ಪದಗಳನ್ನು ಆಯ್ತು ಬರೆಯಿರಿ.
ಮಾದರಿ : ದುಡಿವನು – ಬೆಳವನು
1. ಸಹಿಸುತ ದುಡಿಯುತ
2. ಪಡೆದನು ತಿರುವನು
3. ಗೆಳೆಯರು ನಡೆವರು
ಈ) ಇಲ್ಲಿರುವ ಪದಗಳನ್ನು ನಿಮ್ಮ ಸಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
1. ದೊಡ್ಡಮನಸು : ವಿಶೇಶ್ವರಯ್ಯನವರು ಅವರ ತಾಯಿ ದೊಡ್ಡ ಮನಸ್ಸು ಮಾಡಿ ಓದಿಸಿದರು.
2. ಹಿಗ್ಗು : ಮಕ್ಕಳ ಆಟ ಪಾಠಗಳನ್ನು ಕಂದು ಮನೆಯಲ್ಲಿ ಹಿಗ್ಗು ತುಂಬಿತ್ತು.
3. ತ್ಯಾಗಿ : ಕರ್ಣನು ದಾನ ಮಾಡುವುದರಲ್ಲಿ ತ್ಯಾಗಿ ಎನಿಸಿಕೊಂಡಿದ್ದನು.
4. ಬೆವರು ಸುರಿಸಿ : ರೈತನು ಬೆವರು ಸುರಿಸಿ ಬೆಳೆ ಬೆಳೆಯುತ್ತಾನೆ.
5. ಅನ್ನದಾತ : ಅನ್ನದಾತನ ಬದುಕು ಇಂದು ಶೋಚನೀಯವಾಗಿದೆ.
ಊಣ) ಕೆಳಗಿನ ಕೋಪಕದಲ್ಲಿ ಅನ್ನದಾತರಿಗೆ ಸಂಬಂಧಿರಿದ ಪದಗಳಿವೆ. ಅವನ್ನು ನೀವು ಪತ್ತೆ ಹಚ್ಚಿ. ಮಾದರಿಯಂತೆ ಗೆರೆ ಎಳೆಯಿರಿ.
ಉತ್ತರಗಳು :
ರೈತ ಹೊಲ
ಮರ ಬೆಳ
ಗದ ಎತ್ತು
ತೋಟ ಬೆವರು
ಕೃಷಿಕ ಅನ್ನದಾತ
ನೇಗಿಲು ದೊಡ್ಡ ಮನಸು
ಹಿಗ್ಗುಕುಗು ದವಸಧಾನ್ಯ
ಅಭ್ಯಾಸ
I. ಪದಗಳ ಅರ್ಥ ತಿಳಿಯಿರಿ.
ಅನ್ನ – ಆಹಾರ
ತ್ಯಾಗಿ – ತ್ಯಾಗ ಮಾಡುವವನು, ವಿರಾಗಿ
ದಾತ – ದಾನಿ, ಒಡೆಯ, ಕೊಡುವವ
ನಾಡ – ನಾಡಿನ, ಪ್ರಾಂತದ
ಹೂಲ – ಜಮೀನು, ಕೃಷಿ ಭೂಮಿ
ಅನ್ನದಾತ – ರೈತ
ದವಸಧಾನ್ಯ – ಆಹಾರ ಪದಾರ್ಥಗಳು
ದುಡಿ – ಕೆಲಸ ಮಾಡು, ಶ್ರಮವಡು
ಸಹಿಸು – ತಾಳಿಕೊಳ್ಳು ಸ್ಮರಿಸು
ಬೇಗ – ಉರಿ, ಉಮ್ಮತ
ಟಿಪ್ಪಣಿ
ಯೋಗಿ – ನಿಯಮಬದ್ಧವಾಗಿ ಕಾರ್ಯನಿರ್ವಹಿಸುತ್ತ ಜೀವನ ನಡೆಸುವವ, ಯೋಗದಲ್ಲಿ ನಿರತನಾದವ. ಹಿಗ್ಗುಕುಗು – ಏರುಪೇರು, ಉತ್ಸಾಹ ನಿರಾಸ, ಕಲವೊಮ್ಮ ಆನಂದ, ಮಗದೊಮ್ಮೆ ದುಃಖ
ಗುಡುಗು – ಮಳಗಾಲದಲ್ಲಿ ಮೋಡಗಳ ಘರ್ಷಣೆಯಿಂದ ಉಂಟಾಗುವ ಶಬ್ದ.
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
ಪಾಠ ಪ್ರವೇಶ : ‘ಉಪ್ಪರಿಗೆ ಮನೆಯವರಾದರೂ ಉಪ್ಪಿಲ್ಲದ ಉಣ್ಣಲಾರದು’, ‘ಅಗರ್ಭ ಶ್ರೀಮಂತರೂ ಸಹ ಅನ್ನವನ್ನಲ್ಲದೆ ಅನ್ನವನ್ನು – ತಿನ್ನಲಾರರು’ ಈ ನುಡಿ ಮುತ್ತುಗಳು ಆಹಾರದ ಮಹತ್ವವನ್ನು ತಿಳಿಸುತ್ತದೆ. ನಾವು ಊಟ ಮಾಡುವ ಆಹಾರ ರೈತನಗೆವರಿನ ಫಲ. ಆತ ಭೂಮಿಯನ್ನು ಹಸನು ಮಾಡಿ, ಬೀಜವನ್ನು ಬಿತ್ತಿ ಗೊಬ್ಬರ ಹಾಕಿ, ನೀರು ಉಣಿಸಿ ಆರೈಕ ಮಾಡಿ. ಆಹಾರವನ್ನು ನಾಡಿಗೆ ಹಂಚುತ್ತಾನೆ. ಹೀಗಾಗಿಯೇ ರೈತನನ್ನು ನಮ್ಮ ದೇಶದ ಬೆನ್ನಲುಬು ಎಂದು ಕರೆಯುತ್ತೇವ ರೈತ ಕಷ್ಟಪಟ್ಟು ದುಡಿದು ನಾಡಿನ ಜನರ ಹಸಿವನ್ನು ನೀಗುತ್ತಾನ. ಅಂತಹ ರೈತನ ದುಡಿಮೆಯನ್ನು ಅನೇಕ ಕವಿಗಳು ಕೊಂಡಾಡಿದ್ದಾರೆ. ಹಾಡುಕಟ್ಟಿ ನಮನ ಸಲ್ಲಿಸಿದ್ದಾರೆ. ಅಂತಹ ‘ನೇಗಿಲ ಯೋಗಿ’, ‘ಅನ್ನದಾತ’ ಎಂದು ಕರೆಯಲಾಗಿದೆ.
ಸಾರಾಂಶ
ನಮ್ಮ ನಾಡಿನ ರೈತನು ಹೊಲದಲ್ಲಿ ಸದಾಕಾಲ ದುಡಿಯುವನು, ದುಡಿದು ದುಡಿದು ನಾಡ ಜನರ ಬದುಕಿಗಾಗಿ ದವಸ ಧಾನ್ಯ ಬೆಳೆಯುವನು ಇವನೇ ನಮ್ಮ ಅನ್ನದಾತ ಎಂದು ಕವಿ ಅನ್ನದಾತನ ಪರಿಚಯಿಸಿದ್ದಾರೆ. ರೈತನು ಮಳೆಯನು ಲೆಕ್ಕಿಸದ ಚಳಿಗಾಳಿಗೆ ಎದೆಗುಂದದೆ, ಬಿಸಿಲ ಝಳಕೆ ಹೆದರದೆ, ಬೆವರ ಸುರಿಸಿ, ಕಷ್ಟಗಳನ್ನೆಲ್ಲ ಸಹಿಸಿ ಒಂದೆ ಸಮನೆ ದುಡಿಯುತ್ತಾನೆ. ಸದಾ ಕಾಲ ದುಡಿದು ತನ್ನ ದೇಹವನು ಗಟ್ಟಿಗೊಳಿಸಿಕೊಂಡು ದೊಡ್ಡ ಮನಸ್ಸಿನಿಂದ ದೇವರ ಆಶೀರ್ವಾದ ಪಡೆದು ಯೋಗಿಯಾಗಿ ತ್ಯಾಗಿಯಾಗಿ ಜಗಕ್ಕೆಲ್ಲಾ ಅನ್ನ ನೀಡುತ್ತಾನ ಈ ಅನ್ನದಾತ. ರೈತನ ಬಾಳಸಂಗಾತಿಯಂತೆ ಅವನಿಗೆ ಸದಾಕಾಲ ಜೊತೆಗೂಡಿ ದುಡಿಯುವುದು ಅವನ ಎರಡು ಎತ್ತುಗಳು.
ಇವರ ನಡುವೆ ಒಳ್ಳೆಯ ಗೆಳೆಯತನವಿದೆ. ಕಷ್ಟವಿರಲಿ, ಸುಖವಿರಲಿ, ಒಬ್ಬರಿಗೊಬ್ಬರು ಹೊಂದಿಕೊಂಡು ಹೊಲದಲ್ಲಿ ದುಡಿಯುತ್ತಾ – ಅನ್ನದಾತರಂದು ಕರೆಸಿಕೊಂಡಿದ್ದಾರೆ ಎಂದು ಕವಿ ಸತ್ಯಾರ್ಥಿ ತಿಳಿಸಿದ್ದಾರೆ.
ಕೃತಿಕಾರರ ಪರಿಚಯ:
ಸತ್ಯಾರ್ಥಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಚನ್ನಬಸಪ್ಪ ಹೊಸಮನಿ ಅವರು 2938ರಲ್ಲಿ ಬೆಳಗಾಗಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ಜನಿಸಿದರು. ಇವರು ‘ದಿವ್ಯ ಜೀವಿ’, ‘ಕಿತ್ತೂರ ವೀರಶ್ರೀ’, ‘ಮಕ್ಕಳ ಸೊಗಸು’, ‘ಪುಟ್ಟ ಭಾರತ’, ಅನ್ನದಾತ ಮತ್ತು ಇತರ ಕವಿತೆಗಳು’ ಮುಂತಾದ ಕವನ ಸಂಕಲಗಳನ್ನು ‘ಪುಟ್ಟನ ಕನಸು’ ಎಂಬ ಮಕ್ಕಳ ಕಾದಂಬರಿಯನ್ನು “ವೀರಸ್ವರ್ಗದಲ್ಲಿ ಭಾರತೀಯರು’, ‘ತಿರುಳನ್ನಡ ಕನ್ನಡತಿಯರು’ ಎಂಬ ನಾಟಕಗಳನ್ನು ರಚಿಸಿದ್ದಾರೆ. ವಸ್ತು ಪಠ್ಯವನ್ನು ‘ಅನ್ನದಾತ ಮತ್ತು ಇತರ ಕವಿತೆಗಳು’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಶ್ರೀಯುತರಿಗೆ ಅವರ ಅಭಿಮಾನಿ ಬಳಗ ‘ಸತ್ಯಾರ್ಥಿ’ ಎನ್ನುವ ಅಭಿನಂದನ ಗ್ರಂಥವನ್ನು ಸಮರ್ಪಿಸಿದೆ.