ಅಥರ್ಗಾ ಎಂಬುದು ಒಂದು ಗ್ರಾಮ. ಇದು ಬಿಜಾವುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. ಅಲ್ಲೊಂದು ಗುಡಿ. ಊರ ಜನರ ದೈನಂದಿನ ಚಟುವಟಿಕೆ ಪ್ರಾರಂಭಗೊಳ್ಳುವುದು ಈ ಗುಡಿಯಲ್ಲಿಯ ಮೂರ್ತಿಯ ದರ್ಶನದ ನಂತರವ ಹೆಂಗಳೆಯರಲ್ಲಿ ಕಾಯಿ ಕರ್ಪೂರದೊಂದಿಗೆ ಗುಡಿಗೆ ಹೋಗಿ ತಮ್ಮ ಮಕ್ಕಳ ಉಜ್ವಲ ಶಿಕ್ಷಣಕ್ಕಾಗಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಪ್ರದಕ್ಷಿಣೆ ಹಾಕುತ್ತಾರೆ. ಉರುಳು ಸೇವೆ ಮಾಡುತ್ತಾರೆ. ಈ ಮೊದಲು ಅಥರ್ಗಾ ಒಂದು ಕೊಂಬೆ, ಅನಕ್ಷರತೆಯ ತವರು ಹಾಗೂ ದುರ್ಗುಣಗಳ ಬೀಡಾಗಿತ್ತು. ರೇವಣಸಿದ್ದಪ್ಪ ಮಾಸ್ತರರ ಆಗಮನದಿಂದ ಕೊಂಪೆ ಸಂಪಿಗೆಯಾಯಿತು. ಜನರನ್ನು ತಿದ್ದಿದರು. ತೀಡಿದರು. ದುಡಿಯಲು ಶಕ್ತಿ ನೀಡಿದರು. ಕತ್ತಲಿದ್ದ ಮನೆಗೆ ಬೆಳಕು ತಂದರು, ಈ ಬಗೆಗೆ ಇಂದಿಗೂ ಹಿರಿಯರು ಹಾಗೂ ವೃದ್ಧರು ಹಾಡಿ ಹೊಗಳುತ್ತಾರೆ. ಅವರು ಮಾಡಿ ತೋರಿಸಿದ್ದು ಒಂದೇ ಎರಡೇ! ಗ್ರಾಮ ಸುಧಾರಣೆ, ಯುವಕರಿಗೆ ಮಾರ್ಗ ದರ್ಶನ, ಕೃಷಿಯಲ್ಲಿ ಉತ್ತೇಜನ ಮೂಢನಂಬಿಕೆ ವಿರುದ್ಧ ತಿಳುವಳಿಕೆ, ಗುಡಿ ಕೈಗಾರಿಕ ಬಗ್ಗೆ ಕಲ್ಪನೆ ಮೂಡಿಸಿದರು. ಹೆಣ್ಣುಮಕ್ಕಳ ಸಮಾನತೆ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಿಂದ ಈ ಬರಲಾರಂಭಿಸಿದರು. ವ್ಯಾಜ್ಯಗಳು

ನ್ಯಾಯಕಟ್ಟೆಯಲ್ಲಿಯೇ ತೀರ್ಮಾನಗೊಳ್ಳುತ್ತಿದ್ದವು. ಹೀಗೆ ಮಾಸ್ತರರು ಜನಸೇವೆಯಲ್ಲಿಯೇ ಕೊನೆಯುಸಿರೆಳೆದರು. ಈಗ ಊರ ಮಧ್ಯದಲ್ಲಿಯೇ ಈ ಸಮಾಜಮುಖಿ ಮಾಸ್ತರರಿಗೊಂದು ಗುಡಿ, ಮಾಸ್ತರರ ಆಳತ್ತರದ ಪ್ರತಿಮ ಸ್ಥಾಪನಗೊಂಡಿತು. ನಿತ್ಯ ಎರಡು ಬಾರಿ ಪೂಜೆ. ಅದಕ್ಕೊಬ್ಬ ಅರ್ಚಕ ಈ ಶಿಕ್ಷಕರಿಗಾಗಿ ಪ್ರತಿ ವರ್ಷ ಶಿವರಾತ್ರಿಯಂದು ಭಾರಿ ಜಾತ್ರೆ ನಡೆಯುತ್ತದೆ. ಮಾಸ್ತರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡುತ್ತಾರೆ. ಇಡೀ ರಾತ್ರಿ ಭಜನೆ, ಕೀರ್ತನ ನಡೆಯುತ್ತದೆ. “ಊರವರು ನಾವು ಮಾಸ್ತರರ ಜಾತ್ರೆ ಮಾಡ್ತೀವಿ. ಅವನ್ನು ನಾವು ದೇವರಂತ ನಂಬಿದ್ರಿ” ಎಂದು ಹೆಮ್ಮೆಯಿಂದ ಹೇಳುತ್ತಾರೆ.

“ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ” ಎಂದು ಆರ್ಯೋಕ್ತಿ ಈ ದಿನಗಳಲ್ಲಿ ಸವಕಲಾಗಿದೆ. ಆದರ ಇಲ್ಲಿ ಈ ಮಾತುಗಳು ಜೀವಂತವಾಗಿವೆ. ಇದು ಸಾಮಾಜಿಕ ಮೌಲ್ಯದ ಪ್ರತೀಕವಲ್ಲವೇ?

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :

1. ರೇವಣಸಿದ್ದಪ್ಪ ಮಾಸ್ತರರು ಅಥರ್ಗಾ ಗ್ರಾಮವನ್ನು ಹೇಗೆ ಸುಧಾರಣೆ ಮಾಡಿದರು?

ಉತ್ತರ :

ರೇವಣಸಿದ್ದಪ್ಪ ಮಾಸ್ತರರ ಆಗಮನದಿಂದ ಹಾಳು ಕೊಂಪೆಯಾದ ಅಥರ್ಗಾ ಗ್ರಾಮದಲ್ಲಿ ಬೆಳಕು ಮೂಡಿತು. ಗ್ರಾಮಸುಧಾರಣೆ, ಯುವಕರಿಗೆ ಮಾರ್ಗದರ್ಶನ, ಕೃಷಿವಯಲ್ಲಿ ಉತೇ ಜನ, ಮೂಡನಂಬಿಕೆಗಳ ವಿರುದ್ಧ ತಿಳುವಳಿಕೆ, ಗುಡಿ ಕೈಗಾರಿಕೆಗಳ ಬಗ್ಗೆ ಕಲ್ಪನೆ

ಮೂಡಿಸಿದರು. ಹೆಣ್ಣು ಮಕ್ಕಳ ಸಮಾನತೆ, ಮದ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿಸಿದ್ದರು. ಗ್ರಾಮಕ್ಕೆ ಸೌಕರ್ಯ ಬರುವಂತೆ ಮಾಡಿದರು. ಆ ಮೂಲಕ ಅಥರ್ಗಾ ಗ್ರಾಮ ಒಂದು ಮಾದರಿ ಗ್ರಾಮವನ್ನಾಗಿ ಬದಲಾಯಿಸಿದರು.